ಮಾನ್ಯ : ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹ ಯಜ್ಞದ ನಾಲ್ಕನೇ ದಿನವಾದ ಬುಧವಾರದಂದು ಶ್ರೀಕೃಷ್ಣಾವತಾರ - ನಂದೋತ್ಸವ ಕಾರ್ಯಕ್ರಮವು ನೆರೆದಿದ್ದ ಭಕ್ತರನ್ನು ಭಾವಪರವಶಗೊಳಿಸಿತು. ವಾಸುದೇವನು ಬುಟ್ಟಿಯಲ್ಲಿ ಬಾಲಕೃಷ್ಣನನ್ನು ತಲೆಯ ಮೇಲೆ ಹೊತ್ತುಕೊಂಡು ಪ್ರದಕ್ಷಿಣೆಗೈಯುವಾಗ ಕೃಷ್ಣ ರಾಧೆಯರ ವೇಷದಲ್ಲಿ ಪುಟಾಣಿ ಮಕ್ಕಳು ಭಾಗವಹಿಸಿ ಮೊಸರು ಕುಡಿಕೆ ಒಡೆಯುವಂತಹ ಕೃಷ್ಣನ ತುಂಟಾಟದ ಲೀಲೆಗಳನ್ನು ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಸಪ್ತಾಹವು ದಿನಾಂಕ 21.11.26 ಶನಿವಾರದವರೆಗೆ ನಡೆಯಲಿದ್ದು, ಐದನೇ ದಿನವಾದ ಗುರುವಾರದಂದು ಬೆಳಗ್ಗೆ 06.30ರಿಂದ ಪಾರಾಯಣ, 08.00 ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಬೆಳಗ್ಗೆ 10.30 ರಿಂದ ಪ್ರವಚನ, ಮಧ್ಯಾಹ್ನ ಅನ್ನದಾನ, ಭಜನೆ ಸಂಜೆ 04:00 ರಿಂದ ಪ್ರವಚನ 05.30 ರಿಂದ ರುಕ್ಮಿಣಿ ಸ್ವಯಂವರದ ವಿಶೇಷ ಕಾರ್ಯಕ್ರಮಗಳು ನಡೆಯಲಿರುವುದು.



