ಅಪಘಾತದಲ್ಲಿ ಗಂಭೀರ ಗಾಯಗೊಂಡ ಬದಿಯಡ್ಕದ ರಾಜೇಶ್ ಬರ್ಲ ಚಿಕಿತ್ಸೆಗೆ ನೆರವಿನ ಹಸ್ತ; ಸಹಾಯ ಸಮಿತಿ ರಚನೆ
ಬದಿಯಡ್ಕ: ಇಲ್ಲಿನ ಮೇಲಿನ ಪೇಟೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡು, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಬದಿಯಡ್ಕದ ಪಿಗ್ಮಿ ಏಜೆಂಟ್ ರಾಜೇಶ್ ಬರ್ಲ ಅವರ ಚಿಕಿತ್ಸೆಗೆ ನೆರವಾಗಲು ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ನೇತೃತ್ವದಲ್ಲಿ 'ಚಿಕಿತ್ಸಾ ಸಹಾಯ ಸಮಿತಿ'ಯನ್ನು ರಚಿಸಲಾಗಿದೆ. ಅಪಘಾತದಲ್ಲಿ ರಾಜೇಶ್ ಅವರ ಪತ್ನಿ ವೀಣಾ ಮೃತಪಟ್ಟಿದ್ದು, ಗಾಯಗೊಂಡಿರುವ 9 ವರ್ಷದ ಪುತ್ರಿ ಚೇತರಿಸಿಕೊಳ್ಳುತ್ತಿದ್ದಾಳೆ. ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಅವರ ವೈದ್ಯಕೀಯ ವೆಚ್ಚಕ್ಕೆ 15 ಲಕ್ಷ ರೂ.ಗೂ ಅಧಿಕ ಮೊತ್ತದ ಅವಶ್ಯಕತೆಯಿದೆ.ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಚಿಕಿತ್ಸಾ ನಿಧಿ ಸಂಗ್ರಹಣೆಗಾಗಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಸಮಿತಿಯ ಚೇರ್ಮೇನ್ ಆಗಿ ಶಂಕರ ಡಿ. (ಗ್ರಾಮಪಂಚಾಯಿತಿ ಅಧ್ಯಕ್ಷರು), ಸಂಚಾಲಕರಾಗಿ ಬಾಲಕೃಷ್ಣ ಶೆಟ್ಟಿ ಕೆ. (ವಾರ್ಡು ಸದಸ್ಯರು) ಹಾಗೂ ಕೋಶಾಧಿಕಾರಿಯಾಗಿ ರಾಜೇಶ್ ಚಂಬಲ್ತಿಮಾರು (ನಿವೃತ್ತ ಪ್ರಾಧ್ಯಾಪಕರು) ಅವರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ ಸೇರಿದಂತೆ ವಿವಿಧ ವಾರ್ಡುಗಳ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಶಂಕರ ಪಾಟಾಳಿ ವಂದಿಸಿದರು.
......
ರಾಜೇಶ್ ಅವರು ಶೀಘ್ರ ಗುಣಮುಖರಾಗಲು ದುಬಾರಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದ್ದು, ಜೊತೆಗೆ 14 ವರ್ಷ ಹಾಗೂ 9 ವರ್ಷ ಪ್ರಾಯದ ಇಬ್ಬರು ಪುತ್ರಿಯರ ಭವಿಷ್ಯವೂ ನಮ್ಮೆಲ್ಲರ ಮುಂದಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಕುಟುಂಬಕ್ಕೆ ಆಸರೆಯಾಗಲು ಜನಪ್ರತಿನಿಧಿಗಳು, ಗಣ್ಯರು ಹಾಗೂ ಸ್ಥಳೀಯರ ನೇತೃತ್ವದಲ್ಲಿ `ರಾಜೇಶ್ ಬರ್ಲ ಚಿಕಿತ್ಸಾ ಸಹಾಯ ಸಮಿತಿ'ಯನ್ನು ರಚಿಸಲಾಗಿದೆ. ರಾಜೇಶ್ ಅವರ ಚಿಕಿತ್ಸಾ ವೆಚ್ಚ ಹಾಗೂ ಇಬ್ಬರು ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ದೇಶ-ವಿದೇಶಗಳಲ್ಲಿರುವ ಸಹೃದಯಿ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಮಾನವೀಯತೆಯ ನೆಲೆಯಲ್ಲಿ ಕೈಲಾದ ಆರ್ಥಿಕ ನೆರವನ್ನು ನೀಡಬೇಕೆಂದು ಕಳಿಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ.- ಡಿ. ಶಂಕರ, ಅಧ್ಯಕ್ಷರು, ಬದಿಯಡ್ಕ ಗ್ರಾಮಪಂಚಾಯತುಹಾಗೂ ಅಧ್ಯಕ್ಷರು, ರಾಜೇಶ್ ಬರ್ಲ ಚಿಕಿತ್ಸಾ ಸಹಾಯ ಸಮಿತಿ
ಧನಸಹಾಯ ನೀಡುವವರು :
*ಬ್ಯಾಂಕ್ ವಿವರಗಳು:*
- ಖಾತೆ ಸಂಖ್ಯೆ: 68680100012710
- IFSC: BARB0VJBADI
- ಬ್ಯಾಂಕ್: Bank of Baroda, Badiyadka
- Google pay / UPI: 9895725455
- ಖಾತೆದರಾರ್
- ಖಾತೆದಾರರ ಹೆಸರು : ಪ್ರಶಾಂತ್


