ಮಿಂಚಿಪದವು ಶ್ರೀ ಕಾವೇರಿಯಮ್ಮ- ಮಹಾಲಿಂಗೆಶ್ವರ ಕ್ಷೇತ್ರದಲ್ಲಿ ತೀರ್ಥೋದ್ಭವ 17ರಂದುಮುಳ್ಳೇರಿಯ: ಮಿಂಚಿಪದವು ಶ್ರೀ ಕಾವೇರಿಯಮ್ಮ- ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಶ್ರೀ ಕಾವೇರಿ ತೀರ್ಥೋದ್ಭವ ಅಕ್ಟೋಬರ್ 17ರಂದು ನಡೆಯಲಿದೆ. ಅಂದು ರಾತ್ರಿ 7.51ಕ್ಕೆ ಕ್ಷೇತ್ರದ ಪವಿತ್ರವಾದ ಕಾವೇರಿ ಪುಷ್ಕರಣಿಯಲ್ಲಿ ತೀರ್ಥೋದ್ಭವವಾಗಲಿದೆ. ಬಳಿಕ ಕಾವೇರಿಯಮ್ಮನಿಗೆ ಮಹಾಪೂಜೆ, 8.30ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ತೀರ್ಥಾಭಿಷೇಕ ನಡೆಯಲಿದೆ. 18ರಂದು ಬೆಳಿಗ್ಗೆ 7.30ರಿಂದ ಶ್ರೀ ಕಾವೇರಿಯಮ್ಮ- ಮಹಾಲಿಂಗೇಶ್ವರ ಭಜನಾ ಸಂಘ ಮಿಂಚಿಪದವು ಹಾಗೂ ಶಿವಕಾವೇರಿ ಬಾಲಗೋಕುಲ ಮಕ್ಕಳಿಂದ ಭಜನೆ, 8ರಿಂದ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಗಣಪತಿ ಹೋಮ, ಏಕಾದಶ ರುದ್ರಾಭಿಷೇಕ, ನವಕ ಕಲಶಾಭಿಷೇಕ, ಶ್ರೀ ಕಾವೇರಿ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ನಾಗನಿಗೆ ಕ್ಷೀರಾಭಿಷೇಕ, ಗುಳಿಗನಿಗೆ ಸೀಯಾಳ ಸಮರ್ಪಣೆ ನಡೆಯಲಿರುವುದು. 9.30ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 10ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸ್ವಾಮೀಜಿಯವರು ದೀಪ ಪ್ರಜ್ವಲನೆ ನಡೆಸಿ ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ವಾಸುದೇವ ತಂತ್ರಿಯವರು ಧಾರ್ಮಿಕ ಭಾಷಣ ಮಾಡುವರು. ನ್ಯಾಯವಾದಿ ದಾಮೋದರ ಎಂ ಮಂಗಳೂರು ಅಧ್ಯಕ್ಷತೆ ವಹಿಸುವರು. ಹಲವರು ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

