ಮಾನ್ಯ : ಶ್ರೀ ಅಯ್ಯಪ್ಪ ಭಜನಾ ಮಂದಿರ ಚುಕ್ಕಿನಡ್ಕದಲ್ಲಿ ಜರಗಲಿರುವ 32ನೇ ವಾರ್ಷಿಕೋತ್ಸವ ಹಾಗೂ ತಿರುವಿಳಕ್ಕ್ ಮಹೋತ್ಸವದ ಸಮಾಲೋಚನಾ ಸಭೆಯು ಮಂದಿರದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಮಂದಿರದ ಪ್ರಧಾನ ಗುರುಸ್ವಾಮಿ ಕುಂಞ್ಞಿಕಣ್ಣ ಗುರುಸ್ವಾಮಿ ವಹಿಸಿದರು, ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಮಂದಿರ ಸಮಿತಿ ಅಧ್ಯಕ್ಷರಾದ ಮಂಜುನಾಥ ಡಿ ಮಾನ್ಯ ಪ್ರಸ್ತಾವಿಕ ಭಾಷಣ ಮಾಡಿದರು. ತಿರುವಿಳಕ್ಕ್ ಸಮಿತಿ ಅಧ್ಯಕ್ಷರು ಕೃಷ್ಣ ಕುಮಾರ್ ಸಿ ಎಚ್, ಕಾರ್ಯದರ್ಶಿ ಸತ್ಯನಾರಾಯಣ ಸಿ ಎಚ್, ವಿವಿಧ ಮಂದಿರದ ಗುರುಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು. ಶ್ರೀಮತಿ ಜಯಲಕ್ಷ್ಮಿ ನಾರಾಯಣ ಪ್ರಾರ್ಥನೆ ಹಾಡಿದರು. ಪ್ರಜುನ್ ಚುಕ್ಕಿನಡ್ಕ ಸ್ವಾಗತಿಸಿ, ನಿರೂಪಿಸಿದರು, ಹರಿಪ್ರಸಾದ್ ಸಿ ಎಚ್ ವಂದಿಸಿದರು.
ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ | 32ನೇ ವಾರ್ಷಿಕೋತ್ಸವ ಹಾಗೂ ತಿರುವಿಳಕ್ಕ್ ಮಹೋತ್ಸವದ ಸಮಾಲೋಚನಾ ಸಭೆ
October 04, 2026
0
MANJUSHREE TELEVISION
Tags


