ಬೆಳ್ಳೂರು: ಬೆಳ್ಳೂರು ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 11ರಿಂದ 21ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿರುವುದು.
ನವರಾತ್ರಿಯ ಪ್ರತಿದಿನ ಬೆಳಿಗ್ಗೆ 6ರಿಂದ ರಾತ್ರಿ ಮಹಾಪೂಜೆ ತನಕ ಭಜನಾ ಸೇವೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. 16ರಂದು ಚಂಡಿಕಾ ಹೋಮ ನಡೆಯಲಿರುವುದು.ಅಂದು ಬೆಳಗ್ಗೆ 7ರಿಂದ ಚಂಡಿಕಾಹೋಮದ ಸಂಕಲ್ಪ ಪ್ರಾರ್ಥನೆ, ಮಹಾವಿಷ್ಣು ಭಜನಾ ಸಂಘ ಗೋಳಿಕಟ್ಟೆ ಇವರಿಂದ ಕುಣಿತ ಭಜನೆ, 10ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಸ್ವಾಮೀಜಿಯವರು ಆಶೀರ್ವಚನ, ಮಂತ್ರಾಕ್ಷತೆ ನೀಡಲಿದ್ದಾರೆ. 11.30ಕ್ಕೆ ಚಂಡಿಕಾಹೋಮದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.



