ಕಾರ್ಮಾರು : ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಶ್ರೀ ಗಣಪತಿ ದೇವರ ವಿಗ್ರಹ ತಯಾರಿಯ ಮೂಹೂರ್ತ ಕಾರ್ಯಕ್ರಮವು ವಿಗ್ರಹ ತಯಾರಕರಾದ ಬ್ರಹ್ಮಶ್ರೀ ಪುರೋಹಿತ ರತ್ನ ಕೇಶವ ಆಚಾರ್ಯ ಅವರ ಸ್ವಗೃಹದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಭಟ್ ಪುದುಕೋಳಿ, ಆಡಳಿತ ಮಂಡಳಿ ಸದಸ್ಯರಾದ ಸುಂದರ ಶೆಟ್ಟಿ ಕೊಲ್ಲಂಗಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ಭಟ್ ವಳಕುಂಜ, ಕೋಶಾಧಿಕಾರಿ ರಾಮ ಕೆ. ಮಾನ್ಯ, ಯುವಕವೃಂದದ ಅಧ್ಯಕ್ಷರಾದ ಪುರುಷೋತ್ತಮ ಕಾರ್ಮಾರು ಹಾಗೂ ಗೋಕುಲ್ ಶರ್ಮ, ಮುಂತಾದವರು ಉಪಸ್ಥಿತರಿದ್ದರು.


