ತಲಪಾಡಿ : ಸ್ವಾತಂತ್ರ್ಯ ದಿನಾಚರಣೆ: ತಲಪಾಡಿಯ ಸ್ವಾಮಿಕೃಪಾ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ( ರಿ), ಇದರ ಆಶ್ರಯದಲ್ಲಿ ತಲಪಾಡಿಯ ಹ್ಯೂಮನ್ ವೆಲ್ಫೇರ್ ಆಶೋಶಿಯೇಷನ್ (ರಿ) ಇದರ ಸಹಕಾರದೊಂದಿಗೆ ತಲಪಾಡಿಯ ಐತಪ್ಪ ರೈ ಸ್ಮರಣಾರ್ಥ ವೇದಿಕೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನಿವೃತ್ತ ಸೇನಾನಿ ಕ್ಯಾಪ್ಟನ್ ಮಾಧವ ಶೆಟ್ಟಿ ತಲಪಾಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು ಒಂದು ಲಕ್ಷ ಅರವತ್ತು ಸಾವಿರ ವೆಚ್ಚದಲ್ಲಿ ನವೀಕರಣಗೊಳಿಸಿದ ಐತಪ್ಪ ರೈ ಸ್ಮರಣಾರ್ಥ ವೇದಿಕೆಯನ್ನು ನಿರ್ಮಿಸಿಕೊಟ್ಟ ಶ್ರೀ ರಾಮ ಮನೋಹರ ರೈ ತಲಪಾಡಿ ಇವರ ಪರವಾಗಿ ಇವರ ಪುತ್ರ ಅನುಜ್ ರೈ ಇವರನ್ನು ಸ್ಮರಣಿಕೆ, ಶಾಲು, ಫಲಪುಷ್ಪ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ವ್ಯಾಯಾಮ ಶಾಲಾ ಅಧ್ಯಕ್ಷ ಅಶೋಕ ಕೆ ಸಿ ರೋಡು ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಿನ್ನು ಟಿ ಯಂ, ಮಾಜಿ ಅಧ್ಯಕ್ಷ ಶಂಸುದ್ದೀನ್ ತಲಪಾಡಿ, ಶ್ರೀಮಾತ ಮಹಿಳಾ ಮಂಡಳಿ ಅಧ್ಯಕ್ಷೆ ಶ್ವೇತ ಕಿರಣ್, ತಲಪಾಡಿ ಅಂಗನವಾಡಿ ಮುಖ್ಯ ಶಿಕ್ಷಕಿ ಶೋಭಾ ಶೆಟ್ಟಿ, ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ, ವ್ಯಾಯಾಮ ಶಾಲಾ ಮಾಜಿ ಅಧ್ಯಕ್ಷರುಗಳಾದ ಸತೀಶ ಕುದ್ರು, ಯತಿರಾಜ್ ಸೇನವ, ರಾಜೇಶ್ ಕೊಟ್ಟಾರಿ, ಉದ್ಯಮಿ ಅಬ್ದುಲ್ ಖಾದರ್ ರಿಯಾದ್, ಸಾಮಾಜಿಕ ಕಾರ್ಯಕರ್ತರಾದ ಫಾರೂಕ್ ಕೊಳಂಗರೆ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವ್ಯಾಯಾಮ ಶಾಲಾ ಮಾಜಿ ಅಧ್ಯಕ್ಷ ವಸಂತ ದೇವಾಡಿಗ ತಲಪಾಡಿ ನಿರ್ವಹಿಸಿ ವಂದನಾರ್ಪಣೆಗೈದರು.

