ಮಾನ್ಯ : ಕಾರ್ಮಾರು ಮಹಾವಿಷ್ಣು ಕ್ಷೇತ್ರದಲ್ಲಿ ಜರಗುತ್ತಿರುವ ಶ್ರೀಮದ್ ಭಾಗವತ ಸಪ್ತಾಹದ ಮೂರನೇ ದಿನದಂದು ಸಂಜೆ ಸರ್ವೈಶ್ವರ್ಯ ದೀಪ ಪೂಜೆ ಅತ್ಯಂತ ವೈಭವದಿಂದ ನೆರವೇರಿತು.
ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ದೀಪ ಪ್ರಜ್ವಲನೆಗೈದು ದೀಪಾಲಂಕಾರಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.ಬಳಿಕ ಭಾಗವತ ಪ್ರವಚನಕಾರರಾದ ಬ್ರಹ್ಮಶ್ರೀ ನಾರಾಯಣ ಮೂರ್ತಿ ಗುರುಪುರಂ ಇವರು ಮಾತೆಯರಿಗೆ ಅರ್ಚನಾ ಮಂತ್ರವನ್ನು ಉಪದೇಶಿಸಿ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ಮಾತೆಯರು ಭಕ್ತಿ ಶ್ರದ್ಧೆಯಿಂದ ದೀಪಾರ್ಚನೆ ಮಾಡಿ ಕೃತಾರ್ಥರಾದರು.
ನಾಲ್ಕನೇ ದಿನವಾದ ಇಂದು ಸಂಜೆ ವಿಶೇಷ ಆಕರ್ಷಣೆಯಾಗಿ ಕೃಷ್ಣ-ರಾಧೆಯರ ವೇಷ ಹಾಗೂ ಕೃಷ್ಣನ ತುಂಟಾಟ ಕಾರ್ಯಕ್ರಮ ಜರಗಲಿದೆ. ಪುಟಾಣಿ ಮಕ್ಕಳು ಕೃಷ್ಣ-ರಾಧೆಯರ ವೇಷದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಬಹುದು.
ಚಿತ್ರ ಕೃಪೆ : ವೆಡ್ಡಿಂಗ್ ಡೇ ಸ್ಟುಡಿಯೋ ಮಾನ್ಯ


