ಪಾಂಗೋಡು ನವರಾತ್ರಿ ಮಹೋತ್ಸವ - ಎಡನೀರು ಶ್ರೀಗಳಿಂದ ಆಮಂತ್ರಣ ಪತ್ರಿಕೆ ಬಿಡುಗಡೆ.
ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ, ನವರಾತ್ರಿ ಮಹೋತ್ಸವವು 11-10-2026 ರಿಂದ 20-10-2026ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶ್ರೀಗಳು ಅನುಗ್ರಹಿಸಿದರು. ಶ್ರೀ ಕ್ಷೇತ್ರ ಸಮಿತಿ ಗೌರವ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್ ನೇತೃತ್ವವಹಿಸಿದರು. 11-10-2026 ರಂದು ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಯಾಗ, ಎರಡು ಚಂಡಿಕಾ ಹೋಮ, ಅಪರಾಹ್ನ 1ಗಂಟೆಗೆ ದರ್ಶನ ಸೇವೆ, ಮಹಾಲಂಕಾರ ಪೂಜೆ ಜರಗಲಿದ್ದು ಹಾಗೂ ಹತ್ತು ದಿನಗಳ ಸಂಪೂರ್ಣ ಮಹೋತ್ಸವದ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಎಡನೀರು ಮಠ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಲಿರುವರು.

