ಪೆರಡಾಲದಲ್ಲಿ ಶ್ರೀ ಉದನೇಶ್ವರ, ಸಪರಿವಾರ ದೇವತಾ ಪ್ರತಿಷ್ಠೆ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ 7ನೇ ದಿನ ಗುರುವಾರ ಪ್ರಾತಃಕಾಲ 7.40ರಿಂದ 9.30ರಿಂದ ಮಧ್ಯದ ವೃಷಭ ಲಗ್ನದಲ್ಲಿ ಶ್ರೀ ಉದನೇಶ್ವರ ದೇವರು, ಕುಟ್ಟಿಚ್ಚಾತ ಸಹಿತ ಪರಿವಾರ ದೇವತಾ ಪ್ರತಿಷ್ಠೆ ಜರಗಿತು. ಪರಮಪೂಜ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದಿವ್ಯಸಾನ್ನಿಧ್ಯವನ್ನು ವಹಿಸಿದ್ದರು. ಕ್ಷೇತ್ರಾಚಾರ್ಯ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ತಾಂತ್ರಿಕ ವಿಧಾನದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವಕಲಶಾಭಿಷೇಕ ನಡೆಯಿತು. ಪ್ರಾತಃಕಾಲ 108 ತೆಂಗಿನಕಾಯಿ ಮಹಾಗಣಪತಿ ಹೋಮ ನಡೆಯಿತು. ಸಂಜೆ ನಿತ್ಯನೈಮಿತ್ತಿಕಾದಿಗಳ ನಿರ್ಣಯ, ಭದ್ರದೀಪವಿಟ್ಟು ಕವಾಟಬಂಧನ, ಅಂಕುರ ಪೂಜೆ, ಸೋಪಾನಪೂಜೆ ನಡೆಯಿತು. ಊರಪರವೂರ ಸಹಸ್ರಾರು ಮಂದಿ ಭಗವದ್ಭಕ್ತರು ಭಕ್ತಿಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನದಾನ ನಡೆಯಿತು. ಏ.26ರಂದು ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಪ್ರಾತಃಕಾಲ 108 ತೆಂಗಿನ ಕಾಯಿ ಮಹಾಗಣಪತಿ ಹೋಮ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವರ ಪ್ರತಿಷ್ಠಾ ದಿನ ಗುರುವಾರ ಪ್ರಾತಃಕಾಲ 108 ತೆಂಗಿನಕಾಯಿ ಶ್ರೀ ಮಹಾಗಣಪತಿ ಹೋಮ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ನೆರವೇರಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಭಗವದ್ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಮೊಕ್ತೇಸರ ಸೀತಾರಾಮ ವಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲಗುತ್ತು, ಪ್ರಧಾನ ಅರ್ಚಕ ಶಿವರಾಮ ಭಟ್ ಪೆರಡಾಲ, ಆಹಾರ ಸಮಿತಿಯ ಪ್ರಧಾನ ಸಂಚಾಲಕ ಗಣೇಶ ಕೃಷ್ಣ ಅಳಕ್ಕೆ, ಮಾತೃಸಮಿತಿಯ ವಿನಯ ರೈ, ಭಜನಾ ಸಮಿತಿಯ ಗೀತಾ ಎಂ. ಭಟ್ ಮೊದಲಾದವರು ಉಪಸ್ಥಿತರಿದ್ದರು.


